Home⚖️ ಕಾನೂನುಮ್ಯಾಟ್ರಿಮೋನಿಯಲ್​​ನಲ್ಲಿ ಪರಿಚಯವಾದ ವ್ಯಕ್ತಿಯಿಂದ ವೈದ್ಯೆಗೆ ಪಂಗನಾಮ: ಪೀಕಿದ್ದು 2.2 ಲಕ್ಷಕ್ಕೂ ಅಧಿಕ ಹಣ

ಮ್ಯಾಟ್ರಿಮೋನಿಯಲ್​​ನಲ್ಲಿ ಪರಿಚಯವಾದ ವ್ಯಕ್ತಿಯಿಂದ ವೈದ್ಯೆಗೆ ಪಂಗನಾಮ: ಪೀಕಿದ್ದು 2.2 ಲಕ್ಷಕ್ಕೂ ಅಧಿಕ ಹಣ

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಜರ್ಮನಿಯ ನೇತ್ರ ತಜ್ಞನೆಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯೋರ್ವ ಬೆಂಗಳೂರಿನ ವೈದ್ಯೆಗೆ ಮದುವೆಯಾಗುವುದಾಗಿ ನಂಬಿಸಿ ಬರೋಬ್ಬರಿ 22.2 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು, ಸೆಪ್ಟೆಂಬರ್​​ 06: ಜನಪ್ರಿಯ ಮ್ಯಾಟ್ರಿಮೋನಿಯಲ್‌ ವೇದಿಕೆಯ ಮೂಲಕ ಪರಿಚಯವಾದ ವ್ಯಕ್ತಿಯೋರ್ವ ಬೆಂಗಳೂರಿನ ವೈದ್ಯೆಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ. ರಿಚರ್ಡ್ಸ್ ಟೌನ್ ನಿವಾಸಿಯಾಗಿರುವ ವೈದ್ಯೆ ನೀಡಿದ ದೂರಿನ ಪ್ರಕಾರ, 2025ರ ಡಿಸೆಂಬರ್ 20ರಂದು ಮ್ಯಾಟ್ರಿಮೋನಿಯಲ್‌ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಕೆಲವೇ ದಿನಗಳಲ್ಲಿ ತಾನು ಡಾ. ಗಣೇಶ್ ಬರ್ಮನ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯಿಂದ ಪ್ರತಿಕ್ರಿಯೆ ಬಂದಿತ್ತು. ವೈದ್ಯೆಯ ಜೊತೆಗೆ ವಿಶ್ವಾಸ ಗಳಿಸಿದ್ದ ಆರೋಪಿ ಹಂತ ಹಂತವಾಗಿ ಬರೋಬ್ಬರಿ 22 ಲಕ್ಷಕ್ಕೂ ಅಧಿಕ ಹಣವನ್ನು ಪೀಕಿದ್ದಾನೆ ಎನ್ನಲಾಗಿದೆ.

ತಾನು ಜರ್ಮನಿಯ ಬರ್ಲಿನ್‌ನಲ್ಲಿ ನೆಲೆಸಿರುವ ನೇತ್ರ ತಜ್ಞ ಎಂದು ಆತ ಹೇಳಿಕೊಂಡಿದ್ದ. ದೂರವಾಣಿ ಸಂಖ್ಯೆಯನ್ನು ಕೂಡ ವೈದ್ಯೆಯ ಜೊತೆಗೆ ಹಂಚಿಕೊಂಡಿದ್ದ. ತಾನು ವಿಚ್ಛೇದಿತನಾಗಿದ್ದು ಜರ್ಮನಿಯಲ್ಲಿ ವಾಸಿಸುತ್ತಿದ್ದೇನೆ. ತನ್ನ ಏಳು ವರ್ಷದ ಮಗಳು ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದು, ಪೋಷಕರು ಇಂಗ್ಲೆಂಡ್‌ನಲ್ಲಿದ್ದಾರೆ. ತಾನು ಅವರ ಏಕೈಕ ಪುತ್ರ ಎಂದು ಸಂತ್ರಸ್ತ ವೈದ್ಯೆಗೆ ತಿಳಿಸಿದ್ದ. ಅಲ್ಲದೆ, 2026ರ ಫೆಬ್ರವರಿಯ ವೇಳೆಗೆ ಭಾರತಕ್ಕೆ ಮರಳಿ ದೆಹಲಿಯಲ್ಲಿ ಆಸ್ಪತ್ರೆ ಆರಂಭಿಸುವ ಯೋಜನೆ ಹೊಂದಿರುವುದಾಗಿಯೂ ಆತ ಹೇಳಿದ್ದ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments